ದುರ್ಬಲ ಸೇತುವೆ ಕಾರಣದಿಂದ ಬಿಹಾರದ ಗೋಪಾಲ್‌ಗಂಜ್‌ನಲ್ಲೇ ನಿಂತ ವಿಶ್ವದ ಅತಿದೊಡ್ಡ ಶಿವಲಿಂಗ!
ನವದೆಹಲಿ (ಜ.6): 210 ಟನ್ ತೂಕದ ವಿಶ್ವದ ಅತಿದೊಡ್ಡ ಶಿವಲಿಂಗವು ಬಿಹಾರಕ್ಕೆ ಆಗಮಿಸಿದ್ದು, ಜನವರಿ 17 ರಂದು ಪೂರ್ವ ಚಂಪಾರಣ್‌ನ ಕಲ್ಯಾಣಪುರ ಬ್ಲಾಕ್‌ನ ಕೈತ್ವಾಲಿಯಾದಲ್ಲಿರುವ ವಿರಾಟ್ ರಾಮಾಯಣ ಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಬೇಕಿದೆ. ಆದರೆ, ಪೂರ್ವ ಚಂಪಾರಣ್‌ಗೆ ಪ್ರಯಾಣಿಸುವ ಹಾದಿಯಲ್ಲಿ ವಿಶ್ವದ ಅತಿದೊಡ್ಡ ಶಿವಲಿಂಗಕ್ಕೆ ಕೆಲವು ಲಾಜಿಸ್ಟಿಕ್ ಸವಾಲುಗಳು ಎದುರಾಗಿವೆ. ಪ್ರಸ್ತುತ ಈ ಶಿವಲಿಂಗ ಗೋಪಾಲ್‌ಗಂಜ್ ಜಿಲ್ಲೆಯ ಚೆಕ್‌ಪೋಸ್ಟ್‌ನಲ್ಲಿಯೇ ಕೆಲ ದಿನಗಳಿಂದ ನಿಂತಿದೆ. ಪೂರ್ವ ಚಂಪಾರಣ್‌ಗೆ ಪ್ರವೇಶಿಸಬೇಕಿದ್ದಲ್ಲಿ ಗೋಪಾಲ್‌ಗಂಜ್‌ನ ಸೇತುವೆಯನ್ನು ದಾಟಬೇಕಿದೆ. ಆದರೆ, ಸೇತುವೆ ದುರ್ಬಲವಾಗಿರುವ ಕಾರಣಕ್ಕೆ ಸವಾಲುಗಳು ಎದುರಾಗಿದೆ.