ಗುಜರಾತ್‌ನ ಸೋಮನಾಥದಲ್ಲಿ ಶೌರ್ಯಯಾತ್ರೆ; ಡಮರು ಬಾರಿಸಿದ ಪ್ರಧಾನಿ ಮೋದಿ
ಸೋಮನಾಥ (ಗುಜರಾತ್): ಸೋಮನಾಥ ದೇವಾಲಯದ ಆವರಣದಲ್ಲಿ ಭಾನುವಾರ ನಡೆದ ‘ಶೌರ್ಯಯಾತ್ರೆ’ಯಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಜ್ಯದ ವಿವಿಧೆಡೆಯಿಂದ ಬಂದಿದ್ದ 108 ಅಶ್ವಾರೋಹಿಗಳ ತಂಡದ ಜೊತೆಗೆ ‘ಡಮರು’ ಬಾರಿಸಿದ ಯುವಕರ ತಂಡವು ಆತ್ಮೀಯವಾಗಿ ಸ್ವಾಗತಿಸಿತು.