ತಿರುಮಲ ಬಳಿಕ ಶಬರಿಮಲೆ ತುಪ್ಪದಲ್ಲೂ ಗೋಲ್ ಮಾಲ್: ವಿಜಿಲೆನ್ಸ್ ತನಿಖೆಗೆ ಕೇರಳ ಹೈಕೋರ್ಟ್ ಆದೇಶ!
ಕೊಚ್ಚಿ: ಈ ಹಿಂದೆ ತಿರುಮಲ ತುಪ್ಪದಲ್ಲಿ ನಡೆದಿದ್ದ ಭಾರಿ ಅವ್ಯವಹಾರ ಪ್ರಕರಣ ಬಯಲಾದ ಬೆನ್ನಲ್ಲೇ ಇದೀಗ ಹಿಂದೂಗಳ ಮತ್ತೊಂದು ಪವಿತ್ರ ಕ್ಷೇತ್ರ ಶಬರಿಮಲೆ ತುಪ್ಪದಲ್ಲೂ ಭಾರಿ ಗೋಲ್ ಮಾಲ್ ನಡೆದಿದೆ ಎಂದು ಹೇಳಲಾಗಿದೆ.
ಹೌದು.. ಈ ಹಿಂದೆ ಸನ್ನಿಧಾನದ ಚಿನ್ನದ ಕಳ್ಳತನ ವಿಚಾರವಾಗಿ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಶಬರಿಮಲೆಯಲ್ಲಿ ಇದೀಗ ಮತ್ತೊಂದು ಹಗರಣ ಭಾರಿ ಸದ್ದು ಮಾಡುತ್ತಿದೆ.
ಈ ಬಾರಿ ಅಯ್ಯಪ್ಪ ಭಕ್ತರಿಗೆ ನೀಡುವ ತುಪ್ಪದಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಲಾಗಿದೆ. ಅಲ್ಲದೆ ಈ ಸಂಬಂಧ ಕೇರಳ ಹೈಕೋರ್ಟ್ ಕೂಡ ವಿಜಿಲೆನ್ಸ್ ತನಿಖೆಗೆ ಆದೇಶಿಸಿರುವುದು ಪ್ರಕರಣದ ಗಂಭೀರತೆಗೆ ಸಾಕ್ಷಿಯಾಗಿದೆ.