ICC Rankings: 1736 ದಿನಗಳ ಬಳಿಕ ಏಕದಿನ ಕ್ರಿಕೆಟ್ಗೆ ಕಿಂಗ್ ಕೊಹ್ಲಿ ಸಾಮ್ರಾಟ
Virat Kohli Reclaims ICC ODI World No.1 Ranking: ವಿರಾಟ್ ಕೊಹ್ಲಿ ಐಸಿಸಿ ಏಕದಿನ ಬ್ಯಾಟ್ಸ್‌ಮನ್ ಶ್ರೇಯಾಂಕದಲ್ಲಿ ನಂಬರ್ ಒನ್ ಸ್ಥಾನವನ್ನು ಮತ್ತೆ ಅಲಂಕರಿಸಿದ್ದಾರೆ. 1736 ದಿನಗಳ ಸುದೀರ್ಘ ಕಾಯುವಿಕೆಯ ನಂತರ ಈ ಅಗ್ರಸ್ಥಾನವನ್ನು ಮರಳಿ ಪಡೆದಿರುವ ಕೊಹ್ಲಿ, ರೋಹಿತ್ ಶರ್ಮಾ ಅವರನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದಾರೆ. ಡ್ಯಾರಿಲ್ ಮಿಚೆಲ್ ಕೇವಲ ಒಂದು ರೇಟಿಂಗ್ ಪಾಯಿಂಟ್ ಹಿಂದೆ ಇದ್ದು, ಕೊಹ್ಲಿಗೆ ಸ್ಥಾನ ಉಳಿಸಿಕೊಳ್ಳುವುದು ಸವಾಲಾಗಿದೆ. ಮುಂಬರುವ ಪಂದ್ಯಗಳ ಪ್ರದರ್ಶನ ಅವರ ಸ್ಥಾನವನ್ನು ನಿರ್ಧರಿಸಲಿದೆ.