Udupi: ಶೀರೂರು ಪರ್ಯಾಯ: ವಾಹನ ಸವಾರರಿಗೆ ಜಿಲ್ಲಾಧಿಕಾರಿಗಳಿಂದ ಹೊಸ ಮಾರ್ಗಸೂಚಿ
ಉಡುಪಿ: ನಗರದ ಶ್ರೀ ಕೃಷ್ಣ ಮಠದ ಪರ್ಯಾಯ ಮಹೋತ್ಸವದ ಸಂದರ್ಭದಲ್ಲಿ ಭಕ್ತಾದಿಗಳ ಸುಗಮ ಸಂಚಾರಕ್ಕಾಗಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅವರು ವಾಹನ ಸಂಚಾರದಲ್ಲಿ ಮಹತ್ವದ ಬದಲಾವಣೆ ಮಾಡಿ ಅಧಿಸೂಚನೆ ಹೊರಡಿಸಿದ್ದಾರೆ. ವಿಶೇಷವಾಗಿ ಕಾರ್ಕಳ ಮತ್ತು ಮಣಿಪಾಲ ಕಡೆಯಿಂದ ಉಡುಪಿಗೆ ಬರುವ ವಾಹನಗಳಿಗೆ ಪರಿಷ್ಕೃತ ಮಾರ್ಗವನ್ನು ನಿಗದಿಪಡಿಸಲಾಗಿದೆ.