Chinnaswamy Stadium: ಅಭಿಮಾನಿಗಳ ಸುರಕ್ಷತೆಗಾಗಿ ಹೊಸ ಕ್ರಮ ಕೈಗೊಂಡ ಆರ್ ಸಿಬಿ ಫ್ರಾಂಚೈಸಿ
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಸದ್ಯ ಹಾಲಿ ಚಾಂಪಿಯನ್ ಆಗಿದ್ದು, ಮುಂದಿನ ಸೀಸನ್ ಕೂಡಾ ಉತ್ತಮ ರೀತಿಯಲ್ಲಿ ಆರಂಭಿಸಲು ಸಿದ್ದತೆ ನಡೆಸುತ್ತಿದೆ. ಆದರೆ ಕಳೆದ ಸೀಸನ್ ನ ಅಂತ್ಯದಲ್ಲಿ ತವರು ಮೈದಾನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಘಟನೆಯ ಬಳಿಕ ಈ ಬಾರಿ ಬೆಂಗಳೂರಿನಲ್ಲಿ ಪಂದ್ಯಗಳು ನಡೆಯುವುದೇ ಅನುಮಾನ ಎನ್ನಲಾಗಿದೆ. ಇದರ ಮಧ್ಯೆ ಆರ್ ಸಿಬಿ ಫ್ರಾಂಚೈಸ್ ತನ್ನ ತವರು ಮೈದಾನಕ್ಕೆ ಹೊಸ ಕ್ರಮವೊಂದನ್ನು ಪರಿಚಯಿಸಿದೆ.
ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 300 ರಿಂದ 350 ಕೃತಕ ಬುದ್ಧಿಮತ್ತೆ (ಎಐ) ಕ್ಯಾಮೆರಾಗಳನ್ನು ಅಳವಡಿಸಲು ಪ್ರಸ್ತಾಪಿಸಿರುವುದಾಗಿ ಶುಕ್ರವಾರ (ಜ.16) ಆರ್ ಸಿಬಿ ಘೋಷಿಸಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ) ಗೆ ಔಪಚಾರಿಕ ಸಂವಹನದಲ್ಲಿ ಇದನ್ನು ಪ್ರಸ್ತಾಪಿಸಲಾಗಿದೆ. ಈ ಉಪಕ್ರಮದ ಸಂಪೂರ್ಣ ವೆಚ್ಚವನ್ನು ಒಮ್ಮೆ ಭರಿಸಲು ಫ್ರಾಂಚೈಸಿ ಬದ್ಧವಾಗಿದೆ, ಇದರ ಅಂದಾಜು ಅಂದಾಜು 4.5 ಕೋಟಿ ರೂ. ಎಂದು ಆರ್‌ಸಿಬಿ ಫ್ರಾಂಚೈಸಿಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ.