RCBಗೆ ಮೋಸ ಮಾಡಿದ ಎಲೀಸ್ ಪೆರ್ರಿ! ಪೆರ್ರಿ, ಪೆರ್ರಿ ಬೇರೆಡೆಗೆ ಪೇರಿ..!
ತನ್ನ ಆಟ, ಮೈಮಾಟದಿಂದ ವುಮೆನ್ಸ್ ಪ್ರೀಮಿಯರ್ ಲೀಗ್ನ ಬ್ಯೂಟಿ ಕ್ವೀನ್ ಎನಿಸಿಕೊಂಡಿದ್ದ ಎಲೀಸ್ ಪೆರ್ರಿ ವಿರುದ್ಧ, ಇದೀಗ ಕ್ರಿಕೆಟ್ ಅಭಿಮಾನಿಗಳು ತೀವ್ರ ಆಕ್ರೋಶಗೊಂಡಿದ್ದಾರೆ. WPLನಲ್ಲಿ ಆಲ್ರೌಂಡರ್ ಪೆರ್ರಿ ಆಟವನ್ನ ಕಣ್ತುಂಬಿಸಿಕೊಳ್ಳಲು ಫ್ಯಾನ್ಸ್ ಕಾತರದಿಂದ ಕಾಯ್ತಿದ್ರು. ಪೆರ್ರಿ, ಫ್ಯಾನ್ಸ್ಗೆ ಭಾರೀ ನಿರಾಸೆ ಮೂಡಿಸಿ ಹಾರ್ಟ್ ಬ್ರೇಕ್ ಮಾಡಿದ್ದಾಳೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡದ ಆಲ್ರೌಂಡರ್ ಎಲೀಸ್ ಪೆರ್ರಿ ಹೇಳಿದ ಒಂದೇ ಒಂದು ಸುಳ್ಳಿನಿಂದ ಕ್ರಿಕೆಟ್ ಅಭಿಮಾನಿಗಳ ಹೃದಯ ಛಿದ್ರ ಛಿದ್ರವಾಗಿದೆ. ಪ್ರಸಕ್ತ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಪೆರ್ರಿ, ಆರ್ಸಿಬಿ ಪರ ಆಡಬೇಕಿತ್ತು. ಆದ್ರೆ ಡಬ್ಲ್ಯೂ.ಪಿ.ಎಲ್ ಮೇಲೆ ಭಾರೀ ನಿರಾಸಕ್ತಿ ತೋರಿದ ಆಸಿಸ್ ಆಲ್ರೌಂಡರ್, ಭಾರತಕ್ಕೆ ಬರಲು ಹಿಂದೇಟು ಹಾಕಿದ್ದಾರೆ.