Select Location
All Locations
State
Region
City / District
Modi On Iran: ಯುಎಇ ಮೇಲೆ ದಾಳಿ, ಭಾರತೀಯರಿಗೆ ಗಾಯ: ಇರಾನ್​​​ಗೆ ಕಠಿಣ ಎಚ್ಚರಿಕೆ ಕೊಟ್ಟ ಪ್ರಧಾನಿ ಮೋದಿ!

Modi On Iran: ಯುಎಇ ಮೇಲೆ ದಾಳಿ, ಭಾರತೀಯರಿಗೆ ಗಾಯ: ಇರಾನ್​​​ಗೆ ಕಠಿಣ ಎಚ್ಚರಿಕೆ ಕೊಟ್ಟ ಪ್ರಧಾನಿ ಮೋದಿ!

ಪಶ್ಚಿಮ ಏಷ್ಯಾ ಪ್ರದೇಶದಲ್ಲಿ (Middle East) ಕೆಲವು ದಿನಗಳಿಂದ ಶಾಂತಿಯ ವಾತಾವರಣ ಇದ್ದರೂ, ಇದ್ದಕ್ಕಿದ್ದಂತೆ ಇರಾನ್ ನಡೆಸಿದ ಒಂದು ದಾಳಿ (Iran Attack) ಮತ್ತೆ ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಯುಎಇಯ (UAE) ಫುಜೈರಾ ಪ್ರದೇಶದ ಮೇಲೆ ಇರಾನ್ ದಾಳಿ ನಡೆಸಿದ್ದು, ಇದರ ಪರಿಣಾಮ ಭಾರತವನ್ನೂ ತಲುಪಿದೆ. ಈ ದಾಳಿಯಲ್ಲಿ ಮೂವರು ಭಾರತೀಯರು ಗಾಯಗೊಂಡಿರುವುದು ಭಾರತಕ್ಕೆ ದೊಡ್ಡ ಚಿಂತೆಯ ವಿಷಯವಾಗಿದೆ. ಹೀಗಾಗಿ ಇರಾನ್‌ಗೆ ಪ್ರಧಾನಿ ಮೋದಿ ಎಚ್ಚರಿಕೆ ನೀಡಿದ್ದಾರೆ.

ಯುಎಇಯ ಫುಜೈರಾ ಮೇಲೆ ನಡೆದ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದೆ. ಭಾರತದ ವಿದೇಶಾಂಗ ಸಚಿವಾಲಯ ಈಗಾಗಲೇ ಈ ದಾಳಿ ಸ್ವೀಕಾರಾರ್ಹವಲ್ಲ ಎಂದು ಹೇಳಿದೆ. ರಾಷ್ಟ್ರಗಳ ನಡುವಿನ ವಿವಾದಗಳನ್ನು ಯುದ್ಧ, ದಾಳಿ ಮೂಲಕ ಅಲ್ಲ, ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕವೇ ಪರಿಹರಿಸಬೇಕು ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ. ಇರಾನ್‌ಗೆ ಪ್ರಧಾನಿ ಮೋದಿ ಎಚ್ಚರಿಕೆ ಇರಾನ್‌ಗೆ ಪ್ರಧಾನಿ ಮೋದಿ ಎಚ್ಚರಿಕೆ ನೀಡಿದ್ದಾರೆ. ಯಾವುದೇ ದೇಶದ ನಾಗರಿಕರು, ಅಲ್ಲಿ ಇರುವ ಮೂಲಸೌಕರ್ಯಗಳನ್ನು ಗುರಿಯಾಗಿಸಿ ದಾಳಿ ನಡೆಸುವುದು ಅಂತಾರಾಷ್ಟ್ರೀಯ ಮಾನದಂಡಗಳಿಗೆ ವಿರುದ್ಧವಾಗಿದೆ ಎಂಬ ಸಂದೇಶವನ್ನು ಭಾರತ ನೀಡಲು ಪ್ರಯತ್ನಿಸಿದೆ. ಈ ಹಿನ್ನೆಲೆಯಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡ ಸಾಮಾಜಿಕ ಜಾಲತಾಣವಾದ ಟ್ವಿಟರ್ (ಈಗ X) ಮೂಲಕ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಯುಎಇ ಮೇಲೆ ನಡೆದ ಈ ದಾಳಿಯನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ.

ಪ್ರಧಾನಿ ಮೋದಿ ತಮ್ಮ ಸಂದೇಶದಲ್ಲಿ, ‘ಯುಎಇ ಮೇಲಿನ ದಾಳಿ ಮೂವರು ಭಾರತೀಯ ನಾಗರಿಕರನ್ನು ಗಾಯಗೊಳಿಸಿರುವುದು ಅತ್ಯಂತ ದುಃಖದ ಸಂಗತಿ. ನಾಗರಿಕರನ್ನು ಮತ್ತು ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಳ್ಳುವುದು ಯಾವುದೇ ಸಂದರ್ಭದಲ್ಲೂ ಸ್ವೀಕಾರಾರ್ಹ ಅಲ್ಲ’ ಎಂದು ಹೇಳಿದ್ದಾರೆ. ಅಂದರೆ ಯುದ್ಧ, ಸಂಘರ್ಷ ಏನೇ ಇದ್ದರೂ ಸಾಮಾನ್ಯ ಜನರ ಜೀವಕ್ಕೆ, ಅವರ ಜೀವನ ಸಾಗಿಸಲು ಅಗತ್ಯವಾದ ಮೂಲಸೌಕರ್ಯಕ್ಕೆ ಹಾನಿ ಮಾಡುವುದು ಸರಿಯಲ್ಲ ಎಂಬುದು ಭಾರತದ ಸ್ಪಷ್ಟ ನಿಲುವು.


News18 Kannada 1 hour ago
Home Flash News