Select Location
All Locations
State
Region
City / District
ಕದನ ವಿರಾಮ ವಿಸ್ತರಣೆಗೆ ಅಮೆರಿಕ-ಇರಾನ್ ಒಪ್ಪಿಗೆ: ಟ್ರಂಪ್ ಸಹಿಯೊಂದೇ ಬಾಕಿ – ವರದಿ

ಕದನ ವಿರಾಮ ವಿಸ್ತರಣೆಗೆ ಅಮೆರಿಕ-ಇರಾನ್ ಒಪ್ಪಿಗೆ: ಟ್ರಂಪ್ ಸಹಿಯೊಂದೇ ಬಾಕಿ – ವರದಿ

ಟೆಹರಾನ್: ಅಮೆರಿಕ ಮತ್ತು ಇರಾನ್ ನಡುವೆ ಕದನ ವಿರಾಮವನ್ನು 60 ದಿನಗಳವರೆಗೆ ವಿಸ್ತರಿಸುವ ಒಪ್ಪಂದಕ್ಕೆ ಉಭಯ ದೇಶಗಳು ಒಪ್ಪಿಗೆ ಸೂಚಿಸಿದ್ದು, ಒಪ್ಪಂದಕ್ಕೆ ಸಹಿ ಹಾಕಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಮಯವಕಾಶ ಕೇಳಿದ್ದಾರೆ ಎಂದು ವರದಿಯಾಗಿದೆ ಕದನ ವಿರಾಮವನ್ನು ವಿಸ್ತರಿಸಲು ಮತ್ತು ಇರಾನ್‌ನ ಪರಮಾಣು ಕಾರ್ಯಕ್ರಮದ ಕುರಿತು ಮಾತುಕತೆಗಳನ್ನು ಪ್ರಾರಂಭಿಸಲು ಉಭಯ ದೇಶಗಳು ಒಪ್ಪಂದಕ್ಕೆ ಬಂದಿವೆ ಎಂದು ಸುದ್ದಿಸಂಸ್ಥೆ ಎಫ್‌ಪಿ ವರದಿ ಮಾಡಿದೆ. ಆಕ್ಸಿಯೋಸ್ ವರದಿಯ ಪ್ರಕಾರ, ‘ಮಂಗಳವಾರದ ವೇಳೆಗೆ ಕದನ ವಿರಾಮ ಒಪ್ಪಂದದ ಚೌಕಟ್ಟನ್ನು ಸಿದ್ಧಪಡಿಸಲಾಗಿದ್ದು, ಅದಕ್ಕೆ ಬಹುತೇಕ ಒಪ್ಪಿಗೆ ನೀಡಲಾಗಿದೆ. 

ಆದರೆ, ಅಧ್ಯಕ್ಷ ಟ್ರಂಪ್‌ ಮತ್ತು ಇರಾನ್‌ ಪರಮೋಚ್ಚ ನಾಯಕ ಮೊಜ್ತಬಾ ಖಮೇನಿ ಅವರ ಅನುಮೋದನೆ ಇನ್ನು ಬಾಕಿ ಇದೆ’ ಎಂದು ತಿಳಿಸಿದೆ. ‘ಒಪ್ಪಂದದ ವಿವರಗಳ ಬಗ್ಗೆ ಟ್ರಂಪ್ ಅವರಿಗೆ ಮಾಹಿತಿ ನೀಡಲಾಗಿದ್ದರೂ, ಅವರು ತಕ್ಷಣವೇ ಅದಕ್ಕೆ ಸಹಿ ಹಾಕಿಲ್ಲ ಮತ್ತು ಇದರ ಬಗ್ಗೆ ಯೋಚಿಸಲು ನನಗೆ ಒಂದೆರಡು ದಿನಗಳ ಕಾಲಾವಕಾಶ ಬೇಕು ಎಂದು ಹೇಳಿದ್ದಾರೆ’ ಎಂದು ಅಮೆರಿಕದ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಆಕ್ಸಿಯೋಸ್ ವರದಿ ಮಾಡಿದೆ.


Prajavani 2 days ago
Home Flash News