Satish Jarkiholi: ಸಿದ್ದರಾಮಯ್ಯ ಬೆನ್ನಿಗೆ ಚೂರಿ ಹಾಕಿದ ಆರೋಪ, ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ಕೊಟ್ಟ ಸತೀಶ್ ಜಾರಕಿಹೊಳಿ ಹೇಳಿದ್ದೇನು?
ಬೆಂಗಳೂರು (ಮೇ.31): ರಾಜ್ಯ ಕಾಂಗ್ರೆಸ್ನಲ್ಲಿ (Congress) ಮಹತ್ವದ ಬದಲಾವಣೆ ನಡೆದಿದ್ದು, ಡಿಕೆ ಶಿವಕುಮಾರ್ (DK Shivakumar) ಸಾರಥ್ಯದಲ್ಲಿ ಸರ್ಕಾರ ಮುನ್ನಡೆಯಲಿದೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಿದ್ದರಾಮಯ್ಯ (Siddaramaiah) ಅವರ ವಿರುದ್ದ 37 ಶಾಸಕರಿಂದ ಸಹಿ ಸಂಗ್ರಹ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಆದ್ರೆ ಈ ಆರೋಪವನ್ನು ಮಾಜಿ ಸಚಿವ ಸತೀಶ್ ಜಾರಕಿಹೊಳಿ (Satish Jarakiholi) ನಿರಾಕರಿಸಿದ್ದಾರೆ. ಖುದ್ದು ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ನಾನು ಸಿದ್ದರಾಮಯ್ಯ ಬೆನ್ನಿಗೆ ನಿಂತಿಲ್ವಾ? ಸಿದ್ದರಾಮಯ್ಯ ರಾಜೀನಾಮೆ ಕೊಡ್ತಿದ್ದಂತೆ ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡಿದೆ ಎನ್ನುವ ಸುದ್ದಿ ಹಬ್ಬಿತ್ತು. ಸತೀಶ್ ಜಾರಕಿಹೊಳಿ ಆ್ಯಂಡ್ ಟೀಮ್ ಬಗ್ಗೆ ನಾನಾ ವದಂತಿ ಹರಿದಾಡಿತ್ತು. ಹೀಗಾಗಿ ಬೆಂಗಳೂರಿನ ತಮ್ಮ ನಿವಾಸದಲ್ಲಿ ಖುದ್ದು ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರು ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಆಧಾರ ರಹಿತ ಆರೋಪ ಎಂದ್ರು ಸಾಹುಕಾರ್ ಸಿದ್ದರಾಮಯ್ಯ ಅವರ ಬೆನ್ನಿಗೆ ನಾನು ನಿಂತಿಲ್ಲ ಅನ್ನೋದು ಆಧಾರ ರಹಿತ ಆರೋಪ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಆರೋಪ ಮಾಡಿದ್ರು. ಸಿದ್ದರಾಮಯ್ಯ ವಿರುದ್ದ ಸಹಿ ಸಂಗ್ರಹ ಮಾಡಲಾಗಿದೆ ಎನ್ನುವ ವಿಚಾರವೇ ಸುಳ್ಳು. ಈ ಸುದ್ದಿಗೆಲ್ಲಾ ಮಹತ್ವ ಕೊಡಬೇಕಾಗಿಲ್ಲ. ಯಾವ ಸಹಿಯೂ ಹೈಕಮಾಂಡ್‌ಗೆ ಹೋಗಿಲ್ಲ ಎಂದ್ರು.
7 ಜನ ಪ್ರಭಾವಿಗಳಿಂದ ಸಹಿ ಸಂಗ್ರಹ 37 ಜನ ಪ್ರಭಾವಿಗಳು ಸಹಿ ಮಾಡಿದ್ದವರು ಅಂದಿದ್ರೆ ಆ ಪತ್ರ ಇರಬೇಕಿತ್ತು ಅಲ್ವಾ. ಅದೆಲ್ಲಾ ಸುಮ್ಮನೆ ಹರಿಡಿರೋ ಸುಳ್ಳು ಸುದ್ದಿ. ಅವನು ಯಾರೋ ಹಾಕಿದ್ದ ಅದಕ್ಕೆಲ್ಲಾ ಅಷ್ಟು ಮಹತ್ವ ಕೊಡಬೇಕಿಲ್ಲ ಎಂದು ಜಾರಕಿಹೊಳಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಎರಡು ಹಂತದಲ್ಲಿ ಸಂಪುಟ ರಚನೆ ಸಂಪುಟ ಪುನಾರಚನೆ ಬಗ್ಗೆ ಮಾತಾಡಿದ ಸತೀಶ್ ಜಾರಕಹೊಳಿ ಅವ್ರು, ಹೊಸ ಮುಖ್ಯಮಂತ್ರಿ ಇದ್ದಾರೆ. ಜೊತೆಗೆ ಸಿದ್ದರಾಮಯ್ಯ ಕೂಡ ಇದ್ದಾರೆ. ಎರಡು ಹಂತದಲ್ಲಿ ಸಂಪುಟ ರಚನೆ ಆಗ್ಬಹುದು. ಮೊದಲ ಪಟ್ಟಿಯಲ್ಲಿ ಸೀನಿಯರ್ ಯಾರಿದ್ದಾರೆ ಅವರಿಗೆ ಸ್ಥಾನ ಸಿಗಬಹುದು ಎಂದು ಸಾಹುಕಾರ್ ಹೇಳಿದ್ದಾರೆ.