Select Location
All Locations
State
Region
City / District
ಗೋಲ್ಡನ್ ಬೂಟ್ ರೇಸ್: ಮೆಸ್ಸಿ-ಎಂಬಾಪೆ ನಡುವೆ ಮುಂದುವರಿದ ಪೈಪೋಟಿ

ಗೋಲ್ಡನ್ ಬೂಟ್ ರೇಸ್: ಮೆಸ್ಸಿ-ಎಂಬಾಪೆ ನಡುವೆ ಮುಂದುವರಿದ ಪೈಪೋಟಿ

ನವದೆಹಲಿ: ಸಾಗರಮಾಲಾ, ಕುಡಿಯುವ ನೀರು ಸೇರಿದಂತೆ ವಿವಿಧ ಯೋಜನೆಗಳ ಕಾಮಗಾರಿಗಳ ಬಳಕೆ ಪ್ರಮಾಣಪತ್ರವನ್ನು ಕರ್ನಾಟಕ ಸರ್ಕಾರ ಸಲ್ಲಿಸದ ಕಾರಣಕ್ಕೆ ಕೇಂದ್ರ ಸರ್ಕಾರವು ₹640 ಕೋಟಿ ಬಿಡುಗಡೆಗೆ ತಡೆ ಒಡ್ಡಿದೆ. ಕೇಂದ್ರದ ಸಹಾಯಾನುದಾನದ ಮೂಲಕ ರಾಜ್ಯದಲ್ಲಿ ಅನೇಕ ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ. ವಿವಿಧ ಇಲಾಖೆಗಳ ಹಲವು ಯೋಜನೆಗಳಿಗೆ ಅನುದಾನ ಕೋರಿ ರಾಜ್ಯ ಸರ್ಕಾರವು ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿದೆ. ವರ್ಷಗಳು ಕಳೆದರೂ ಹಲವು ಯೋಜನೆಗಳಿಗೆ ಕೇಂದ್ರ ಅನುಮೋದನೆ ನೀಡಿಲ್ಲ. ಅನುದಾನವನ್ನೂ ಬಿಡುಗಡೆ ಮಾಡಿಲ್ಲ.

ಹೀಗಾಗಿ ಕರ್ನಾಟಕ ಭವನದ ಅಧಿಕಾರಿಗಳು ಕೇಂದ್ರ ಸರ್ಕಾರದ ಉನ್ನತ ಅಧಿಕಾರಿಗಳನ್ನು ಇತ್ತೀಚೆಗೆ ಭೇಟಿ ಮಾಡಿ ಮನವಿ ಸಲ್ಲಿಸಿದರು. ಬಾಕಿ ಅನುದಾನಗಳ ಬಿಡುಗಡೆಗೆ ಹಕ್ಕೊತ್ತಾಯ ಮಂಡಿಸಿದರು. ಅನುದಾನ ಬಳಕೆಯ ಪ್ರಮಾಣಪತ್ರ ಸಲ್ಲಿಸಿದರಷ್ಟೇ ಬಾಕಿ ಅನುದಾನವನ್ನು ರಾಜ್ಯಕ್ಕೆ ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರದ ಅಧಿಕಾರಿಗಳು ಸ್ಪಷ್ಟಪಡಿಸಿದರು. ‘ಪ್ರಮಾಣಪತ್ರ ಸಲ್ಲಿಸದೆ ರಾಜ್ಯದ ಅಧಿಕಾರಿಗಳು ಲೋಪ ಎಸಗಿದ್ದಾರೆ. ಅವರು ಎಸಗಿದ ಲೋಪಕ್ಕೆ ಕೇಂದ್ರವನ್ನು ದೂರುವುದು ಸರಿಯಲ್ಲ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ತಿಳಿಸಲಾಗಿದೆ. ಪ್ರಮಾಣಪತ್ರ ಸಲ್ಲಿಸಿದ ಕೂಡಲೇ ಅನುದಾನ ಬಿಡುಗಡೆ ಮಾಡಲಾಗುವುದು’ ಎಂದೂ ಭರವಸೆ ನೀಡಿದರು.

ಜುಲೈ 20ರಿಂದ ಆಗಸ್ಟ್‌ 13ರ ವರೆಗೆ ಸಂಸತ್‌ ಅಧಿವೇಶನ ನಡೆಯಲಿದೆ. ಈ ಸಂದರ್ಭದಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಸಂಸದರ ಜತೆಗೆ ಸಭೆ ನಡೆಸಲು ರಾಜ್ಯ ಸರ್ಕಾರ ಯೋಜಿಸಿದೆ. ವಿವಿಧ ಇಲಾಖೆಗಳಲ್ಲಿ ಬಾಕಿ ಇರುವ ಯೋಜನೆಗಳ ಕುರಿತ ಕಿರು ಪುಸ್ತಕ ಸಿದ್ಧಪಡಿಸಿ ಸಂಸದರಿಗೆ ನೀಡಲು ಸರ್ಕಾರ ಉದ್ದೇಶಿಸಿದೆ.


Prajavani 1 hour ago
Home Flash News